Tuesday, January 15, 2019

            ಮುಖವಾಡದ ಉದಾರತೆ.(ಸ್ವರಚಿತ)

ಉದಯಿಸುವುದು ವೈಚಾರಿಕತೆ
ಹಲವರ ಮನದಂಗಳದಿ
ಸಾಂಪ್ರದಾಯಿಕ ಆಚ್ಛಾದನವ ತಳೆದು
ವೇದಿಕೆಗಳನೇರಿ..ಧೀರತ್ವದಿ ನಿಂತು..
ಧರಿಸಿ ಮುಖವಾಡಗಳ ಉಸುರುವರು
"ಯತ್ರನಾರ್ಯಸ್ತು ಪೂಜ್ಯಂತೇ ರಮಂತೇ ತತ್ರದೇವತಾಹ"
ಮಾತಿನ ಮಧ್ಯದಲಿ ಹೇಳುವರು
'ಸ್ತ್ರೀಮೂಲ'ಸರ್ವತೊಂದರೆಗೆ..
ಸರ್ವಾಪರಾಧಗಳ ಕೇಂದ್ರವವಳು..
ಸುಮ್ಮನೊಮ್ಮೆ ಆಲೋಚಿಸಿದೆ..
ಸೂತ್ರದ ಪಟವಿಡಿದು ಆಡಿಸುವ
ಆಟ ನಿಂತಿಲ್ಲವೇಕೆಂದು...?
'ಸ್ತ್ರೀ'ಮೂಲದ ಲಗಾಮು..
ಪುರುಷ ಹಸ್ತದಲ್ಲಲ್ಲವೇನು?
ಎಲ್ಲಿಯ ವೈಚಾರಿಕತೆ.?
ಎತ್ತಣದುದಾರತೆ..
ಹುಡುಕಿದಷ್ಟೂ ಅರಸುವಿಕೆ..ಬರಿಹೋಳು.
ಬಯಸಿದಷ್ಟೂ ನಿರಾಸೆ..ಹಾಗಾದರೆ
ಹೊಸ ಮನ್ವಂತರವೆಂದಿಗೆ...???

ಕಂದಪದ್ಯದ ಲಕ್ಷಣ


ಕಂದಂ ಗಣಹದಿನಾರರ
ಬಂಧಂ ಮಾತ್ರಾಚತುರ ಸಂಘಟಿತ ಸಮಾರ್ಧ
ಪಾದ ಸಂಚಲಿತಂ ಮೂರ
ರೈದರ ಗಣಗಳ ನಡಿಗೆಯ ಸುಂದರ ಮಿಲನಂ
------_-------------------------------

ಪುರಬಾಣವಹ್ನಿಶರಗಣ
ಮಿರೆನಾಲ್ಕುಂ ಪದದೋಜೆಯುಗ್ಮಗಳೊಳ್ ಪ
ನ್ನೆರಡಿರ್ಪತ್ತೋಳಿಯೆ ಪ
ನ್ನೆರಡಿರ್ಪತ್ತಾಗೆ ಮಾತ್ರೆಗಳ್ ಮೃಗನಯನೇ

ಅಕ್ಷರಗಳ ಹುಟ್ಟು


ನೃತ್ಯಾವಸಾನೆ ನಟರಾಜರಾಜೋ
ನನಾದ ಡಕ್ಕಂ ನವಪಂಚವಾರಂ
ಉದ್ವಕ್ತು ಕಾಮಾನ್ ಸನಕಾದಿ ಸಿದ್ಧಾನ್
ಏತದ್ವಿಮರ್ಷೆ ಶಿವಸೂತ್ರ ಜಾಲಂ