ವೈಜ್ಞಾನಿಕತೆಯಿಂದಲೇ ಭಾರತ ಜಾಗತಿಕ ಮಟ್ಟದಲ್ಲಿ ಗುರ್ತಿಸಿಕೊಂಡಿದೆಯೇ???
-------------------------------------------------------------------
ಇಂದು ಭಾರತ ವಿಜ್ಞಾನ ವಲಯದಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದೆ. ಇಂದು ಹಲವಾರು ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಗುರ್ತಿಸಿಕೊಂಡಿದ್ದರೂ ವಿಜ್ಞಾನವೂ ಅದರ ಒಂದು ಭಾಗವೆಂದೇ ಹೇಳಬೇಕು. ಆದರೆ ಸಂಪೂರ್ಣವಾಗಿ ವಿಜ್ಞಾನವೇ ಭಾರತವಲ್ಲ. ಈಗಿನ ಪರಿಸ್ಥಿತಿಯಲ್ಲಿ ವಿಜ್ಞಾನ ಮುಂದುವರಿದಿದೆ ಈಗಲೂ ದೇಶ ವಿಶ್ವಮಟ್ಟದಲ್ಲಿ ಗುರ್ತಿಸಿಕೊಂಡಿದೆ. ಹಿಂದೆಯೂ ದೇಶ ವಿಶ್ವಮಟ್ಟದಲ್ಲಿ ಗುರ್ತಿಸಿಕೊಂಡಿತ್ತು ಆಗ ವೈಜ್ಞಾನಿಕತೆ ಬೆಳದಿರಲಿಲ್ಲ. ಭಾರತ ವೈಜ್ಞಾನಿಕತೆಯಲ್ಲಿ ಮುಂದುವರೆದಿದೆ ಎಂಬುದಕ್ಕೆ ಆಧಾರವೆಂದರೆ ಆರ್ಯಭಟ ಉಪಗ್ರಹ 1975ರಲ್ಲಿ ಉಡಾವಣೆಯಾದಾಗಿನಿಂದ. ಆದರೆ ಅದಕ್ಕಿಂತ ಹಿಂದೆಯೇ ಭಾರತ ಜಾಗತಿಕ ಮಟ್ಟದಲ್ಲಿ ಗುರ್ತಿಸಿಕೊಂಡಿತ್ತೆಂಬುದಕ್ಕೆ ಕೆಲವು ದೃಷ್ಟಾಂತಗಳನ್ನು ನೋಡಬಹುದು..
* ವಿದೇಶೀಯರಿಗೂ ಮೊದಲು ಅಲೆಗ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದ. ಇದಕ್ಕೆ ಕಾರಣ ಭಾರತದ ವೈಜ್ಞಾನಿಕತೆಯಲ್ಲ. ಅವನಿಗೆ ಬೇಕಾಗಿದ್ದು ಇಲ್ಲಿನ ಅಪಾರವಾದ ಸಂಪತ್ತು ಮತ್ತು ಭಾರತದ ತತ್ವಜ್ಞಾನ ಮಾತ್ರ.
* ಜಗತ್ತಿನ ಮಹಾ ತತ್ವಜ್ಞಾನಿಗಳ ಸಾಲಿಗೆ ಸೇರಿದ್ದ ಸಾಕ್ರೆಟಿಸ್ ಕೂಡ ಭಾರತದ ತತ್ವಜ್ಞಾನಕ್ಕೆ ಮನಸೋತಿದ್ದ ಎಂದರೆ ಆಗಲೇ ಭಾರತದ ಕೀರ್ತಿ ಪತಾಕೆ ವಿದೇಶದಲ್ಲೆಲ್ಲಾ ಹಾರಿತ್ತೆಂದು ಅರ್ಥವಲ್ಲವೇ?
* ಇನ್ನು ಬ್ರಿಟೀಷರು ಭಾರತದ ಮೇಲೆ ಧಾಳಿ ಮಾಡಿದ್ದು ಎಲ್ಲರಿಗೂ ತಿಳಿದ ವಿಷಯವೇ. ಈ ಧಾಳಿಯ ಪ್ರಮುಖ ಉದ್ದೇಶವೇನು. ಭಾರತದ ವೈಜ್ಞಾನಿಕತೆಯಲ್ಲ ಬದಲಾಗಿ ಭಾರತದ ಅಗಾಧ ಸಂಪತ್ತು ಮತ್ತು ಶ್ರೀಮಂತಿಕೆ ಜೊತೆಗೆ ಸಾಂಬಾರ ಪದಾರ್ಥಗಳು ಮತ್ತು ಭಾರತವನ್ನು ಆಳುವ ಮಹದಾಸೆ.
* ಇನ್ನು ಭಾರತದ ಮೇಲೆ ಮುಸ್ಲಿಂ ಧಾಳಿಕೋರರುಗಳಾದ ಘೋರಿಮಹಮದ್,ಘಜ್ನಿ ಮೊಹಮದ್ ಮೊದಲಾದವರು ಧಾಳಿ ಮಾಡಿದರು. ಇದಕ್ಕೆ ಕಾರಣ ಭಾರತದಲ್ಲಿ ಅನೇಕ ತರಹದ ವಿಗ್ರಹಗಳಿದ್ದವು ಮತ್ತು ಇಲ್ಲಿನ ಸಂಪತ್ತುಗಳು ಕಾರಣವಾಗಿದ್ದವು.
* ಇನ್ನು ಒಂದಾನೊಂದು ಕಾಲದಲ್ಲಿ ಭಾರತದಲ್ಲಿ ಮುತ್ತು ರತ್ನಗಳನ್ನು ಬಳ್ಳಗಳಲ್ಲಿ ಅಳೆದು ಮಾರಾಟ ಮಾಡುತ್ತಿದ್ದರು (ವಿಜಯನಗರ ಸಾಮ್ರಾಜ್ಯ) ಅವುಗಳಿಗಾಗಿಯೇ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡುತ್ತಿದ್ದರು. ಇದಕ್ಕೆ ದೇಶದ ವೈಜ್ಞಾನಿಕತೆ ಕಾರಣವಾಗಿರಲಿಲ್ಲ ಬದಲಿಗೆ ಭಾರತದ ವೈಭವಯುತ ಆಳ್ವಿಕೆ ಕಾರಣವಾಗಿತ್ತು.
* ಅನ್ವೇಷಣಾಕಾರರ ಹಸಿವು (ಅನ್ವೇಷಣೆಯ ಹಸಿವು) ಭಾರತವನ್ನು ಆಗಲೇ ಜಾಗತಿಕ ಮಟ್ಟದಲ್ಲಿ ಗುರ್ತಿಸಿತ್ತು.
* ದೇಶದಲ್ಲಿ ಮತ್ತು ಜಗತ್ತಿನಲ್ಲಿ ಕ್ರಿಕೆಟ್ ನೋಡದಿರುವವರ ಸಂಖ್ಯೆ ಕಡಿಮೆ. ಅಂತಹ ಕ್ರಿಕೆಟ್ ಜೀವನದ ದಂತಕತೆ ಬಿರುದಾಂಕಿತ ಸಚಿನ್ ತೆಂಡೂಲ್ಕರ್, ಭಾರತದ ಭದ್ರಕೋಟೆ ಬಿರುದಾಂಕಿತ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಗಂಗೂಲಿ ಮುಂತಾದ ಆಟಗಾರರಿಂದಲೂ ಭಾರತ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.
* ಅತ್ಯಮೂಲ್ಯವಾದ ಮಾನವ ಸಂಪತ್ತಿನಿಂದ ಭಾರತ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಗಾಂಧೀಜಿಯವರು ವರ್ಣಬೇಧನೀತಿಯ ವಿರುದ್ಧ ಹೋರಾಡಿದರು, ವಿಶ್ವಮಾನವ ರವೀಂದ್ರನಾಥ ಠಾಕೂರ್, ಅಬ್ದುಲ್ ಕಲಾಂ, ಸರ್ ಜಗದೀಶ್ ಚಂದ್ರ ಬೋಸ್, ಆರ್ಯಭಟ ಮುಂತಾದ ಮಾನವ ಸಂಪತ್ತಿನಿಂದಲೂ ಭಾರತ ವಿಶ್ವಮಟ್ಟದಲ್ಲಿ ಗುರ್ತಿಸಿಕೊಂಡಿದೆ.
* ಜಗತ್ತಿನಲ್ಲೇ ಅತ್ಯಂತ ಅತ್ಯುತ್ತಮ ನೋಬೆಲ್ ಪಾರಿತೋಷಕವು ಭಾರತದಲ್ಲಿ ಸಿ.ವಿ.ರಾಮನ್ ರವರು ವಿಜ್ಞಾನಕ್ಕೆ ಪಡೆಯುವುದಕ್ಕೂ ಮುಂಚೆಯೇ ಸಾಹಿತ್ಯ ವಿಭಾಗದಲ್ಲಿ 1913ರಲ್ಲಿ ರವೀಂದ್ರನಾಥ ಠಾಕೂರ್ ರವರಿಗೆ ದೊರೆತದ್ದು ಭಾರತ ಹಲವಾರು ಕ್ಷೇತ್ರದಲ್ಲಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂಬುದನ್ನು ದೃಢಪಡಿಸಿತು.
* ಭಾರತದಲ್ಲಿ ಅದೆಷ್ಟೋ ಯಾತ್ರಾಸ್ಥಳಗಳು, ಶಿಲ್ಪಕಲೆಗಳು, ಪ್ರವಾಸಿ ತಾಣಗಳೂ ಇವೆ. ಇದು ಕೂಡ ವಿದೇಶೀಯರನ್ನು ತನ್ನೆಡೆ ಸೆಳೆಯಲು ಯಶಸ್ವಿಯಾಗಿದೆ.
ಉದಾ: ಮೈಸೂರಿನ ದಸರಾ ಉತ್ಸವಕ್ಕೆ ಈಗಲೂ ದೇಶ ವಿದೇಶಗಳಿಂದಲೂ ಯಾತ್ರಿಕರು ಬರುತ್ತಾರೆ.
* ಇನ್ನು ೧೨ನೇ ಶತಮಾನದ ವಚನ ಸಾಹಿತ್ಯವನ್ನು ಹೆಚ್ಚಾಗಿ ಅಭ್ಯಸಿಸಿರುವುದಲ್ಲದೆ ವಿವಿಧ ಭಾಷೆಗಳಲ್ಲಿ ತರ್ಜುಮೆಗೊಂಡಿದೆ. ಹೆಚ್ಚಾಗಿ ವಿದೇಶಿಯರೇ ಈ ಕೆಲಸ ಮಾಡಿದ್ದಾರೆ. ಆ ಮೂಲಕ ಅಪರೂಪದ ಸಾಹಿತ್ಯದ ಮೂಲಕವೂ ದೇಶ ಜಾಗತಿಕ ಮಟ್ಟದಲ್ಲಿ ಗುರ್ತಿಸಿಕೊಳ್ಳಲು ಸಹಾಯಕವಾಗಿದೆ.
ಈ ಮೇಲಿನ ಎಲ್ಲಾ ಕಾರಣಗಳಿಂದಲೂ ಭಾರತ ಜಾಗತಿಕ ಮಟ್ಟದಲ್ಲಿ ಗುರ್ತಿಸಿಕೊಂಡಿದೆ. ಹಾಗೆ ನೋಡಿದರೆ ಭಾರತದ ವಿಜ್ಞಾನ ಜಪಾನಿನ ಒಂದಂಶಕ್ಕೆ ಸರಿಹೊಂದಲಾರದು. ಅಂದಮಾತ್ರಕ್ಕೆ ದೇಶದಲ್ಲಿ ವೈಜ್ಞಾನಿಕತೆ ಇಲ್ಲವೆಂದಲ್ಲ ಕ್ಷಿಪಣಿ ತಂತ್ರಜ್ಞಾನ, ರಾಕೆಟ್ ತಂತ್ರಜ್ಞಾನ, ಬಾಹ್ಯಾಕಾಶ ಹೀಗೆ ಎಲ್ಲ ವಿಭಾಗಗಳಲ್ಲಿಯೂ ಭಾರತ ಉತ್ತಮ ಸಾಧನೆಯನ್ನು ಮಾಡುತ್ತಿದ್ದು ಜಗತ್ತಿನ ಬಲಾಢ್ಯ ರಾಷ್ಟ್ರಗಳೊಟ್ಟಿಗೆ ನಿಲ್ಲುವ ಪ್ರಯತ್ನ ಮಾಡುತ್ತಿದೆ ಇದು ಒಂದುಭಾಗ ಮಾತ್ರ. ಆದರೆ ಸಂಪೂರ್ಣವಾಗಿ ವೈಜ್ಞಾನಿಕತೆಯಿಂದಲೇ ದೇಶ ವಿಶ್ವಮಟ್ಟದಲ್ಲಿ ಗುರ್ತಿಸಿಕೊಂಡಿದೆ ಎಂಬುದನ್ನು ಒಪ್ಪಲಾಗದು..ವೈವಿಧ್ಯತೆಗಳಿಂದ ಕೂಡಿರುವ ಈ ದೇಶ ತನ್ನ ವೈವಿಧ್ಯತೆಯಿಂದಲೇ ಗುರ್ತಿಸಿಕೊಂಡಿದೆ ಎಂಬುದರಲ್ಲಿ ಎರಡು ಮಾತಿಲ್ಲ...
....................................................................................
No comments:
Post a Comment